Holistic care is an integral aspect of the fight against cancer care which lays equal emphasis on the physical and psycho-social needs of patients.Dr. B. S. Ajaikumar
ಚುನಾವಣೆಯ ಹೊಸ್ತಿಲಿನಲ್ಲಿರುವ ರಾಜಕೀಯ ಪಕ್ಷಗಳು ಇದರ ಗಲಾಟೆಯ ನಡುವೆ ಪಿತ್ರಾರ್ಜಿತ ತೆರಿಗೆಯ ಮೇಲಿನ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಡಾ. ಬಿ ಎಸ್ ಅಜಯಕುಮಾರ್ ಅವರು, ''ಇಷ್ಟವಿರಲಿ ಇಲ್ಲದಿರಲಿ, ಹೆಚ್ಚಿನ ಜನರಿಗೆ ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ದೊಡ್ಡ ಪ್ರೇರಕವೆಂದರೆ ಹಣ ಉಳಿತಾಯದ ಆಮಿಷ ಹಾಗೂ ತಮ್ಮ ಮುಂದಿನ ಪೀಳಿಗೆಗೆ ಆಸ್ತಿ ಮಾಡಬೇಕಾದ ಜರೂರು. ಅಂತೆಯೇ, ಹೆಚ್ಚಿನ ಜನರು ಕಷ್ಟಪಟ್ಟು ದುಡಿದು, ಹಣ ಸಂಪಾದಿಸಿ, ತಮಗೆ ಹಾಗೂ ತಮ್ಮ ಕುಟುಂಬಕ್ಕಾಗಿ ಸಂಪತ್ತನ್ನು ಕ್ರೂಢಿಕರಿಸುತ್ತಾರೆ.
ಅಂತೆಯೇ ''ನಮ್ಮ ದೇಶದಲ್ಲಿ ಬಡವರ ಪರವಾಗಿ ಸಾಕಷ್ಟು ಯೋಜನೆ ಹಾಗೂ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ, ಆದರೆ ಆ ಕಾರ್ಯಕ್ರಮಗಳು ಅವರಿಗೆ ತಲುಪುತ್ತಿದೆಯೇ ಅಥವಾ ಅದಕ್ಕೆ ಸೂಕ್ತ ಹಣಕಾಸಿನ ವ್ಯವಸ್ಥೆ ಆಗುತ್ತಿದೆಯೇ ಎಂಬುದರ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಇದರಿಂದ ಸಾಕಷ್ಟು ಕಾರ್ಯಕ್ರಮಗಳು ಅನುಷ್ಠಾನವಾಗದೇ ಕೇವಲ ಕಾಗದದ ಮೇಲಿನ ಕಾರ್ಯಕ್ರಮಗಳಾಗಿ ಉಳಿದು ಬಿಡುತ್ತವೆ. ಈ ಬಗ್ಗೆ ಚರ್ಚೆಗಳು ಸಹ ಹೆಚ್ಚು ಮುನ್ನೆಲೆಗೆ ಬರುವುದಿಲ್ಲ. ಬಡವರ ಏಳ್ಗೆಗಾಗಿ ಇರುವ ಕಾರ್ಯಕ್ರಮಗಳು ಅಥವಾ ಯೋಜನೆಗಳು ಜಾರಿಯಾದ ಬಳಿಕ ಆ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಬಡವರಿಗೆ ತಲುಪುತ್ತಿವೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಯಾವುದೇ ನೀತಿ-ನಿಯಮಗಳಿಲ್ಲ.
ಮಹಾತ್ಮ ಗಾಂಧೀಜಿ ಅವರ ಸಾಮಾಜಿಕ ಸಂಪತ್ತು ನಿರ್ಮಿಸುವ ಅವರ ಕರೆ ಈಗಲೂ ಹಾಗೇ ಇದೆ, ಅದರ ಅನುಷ್ಠಾನ ಸಾಧ್ಯವಾಗಿಲ್ಲ. ಸ್ವಾತಂತ್ರ್ಯದ ನಂತರ ಈ ಸಮಾಜ ಸಮಾನವಾಗಿ ಬೆಳೆಯುವ ಬದಲು ಕೆಲವರಷ್ಟೇ ಶ್ರೀಮಂತರಾಗದರು, ಈಗಲೂ ಸಹ ಶ್ರೀಮಂತರಷ್ಟೇ ಮತ್ತಷ್ಟು ಶ್ರೀಮಂತರಾಗುತ್ತಿದಾರೆಯೇ ವಿನಃ ಬಡವರು ಬಡವರಾಗಿಯೇ ಉಳಿದುಕೊಳ್ಳುತ್ತಿದ್ದಾರೆ. ಈ ಸಂಪೂರ್ಣ ವ್ಯವಸ್ಥೆ ಬದಲಾಗಬೇಕಿದೆ. ಸಂಪೂರ್ಣ ಬದಲಾಗದಿದ್ದರೂ ಒಂದಷ್ಟು ವ್ಯವಸ್ಥೆಗಳಲ್ಲಿ ಕೊಂಚ ಬದಲಾವಣೆ ತಂದರೂ ದೇಶದ ಏಳಿಗೆ ಹಾಗೂ ಬಡವರ ಏಳಿಗೆ ಎರಡೂ ಆಗಲಿದೆ. ಇದಕ್ಕೆ ನಮ್ಮ ಸರ್ಕಾರ ಹೆಚ್ಚು ವಿವೇಕದಿಂದ ಕೆಲಸ ಮಾಡಬೇಕಿದೆ ಎಂದರು.
ಸರ್ಕಾರ ಹೊಸದಾಗಿ ಯೋಜನೆ ತರುವುದು ಅಥವಾ ಅದಕ್ಕಾಗಿ ಹಣಕಾಸು ಮೀಸಲಿಡುವುದು ಸಾಮಾನ್ಯ. ಇದರ ಜೊತೆಗೆ, ಈಗಿರುವ ಶ್ರೀಮಂತರ ಪಟ್ಟಿ ಮಾಡಿ, ಅದರಿಂದಲೂ ದೇಣಿಗೆ ಪಡೆಯುವ ಕೆಲಸವನ್ನು ಪ್ರಾರಂಭಿಸಬೇಕು. ದೇಶದ ಲೋಕೋಪಕಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಶ್ರೀಮಂತ ವರ್ಗವನ್ನು ಪ್ರೇರೇಪಿಸಬೇಕು.ಇದಕ್ಕೆ ಸರ್ಕಾರ ಸೂಕ್ತ ನೀತಿ ನಿಯಮವನ್ನೂ ಸಹ ಜಾರಿಗೊಳಿಸಬೇಕು. ಈ ಸಂಬಂಧ ವಿವೇಕಯುತ ನೀತಿಯನ್ನು ರೂಪಿಸುವ ಉತ್ತಮ ಆಯ್ಕೆ ಸರ್ಕಾರದ ಕೈಲಿದೆ.
ಇದನ್ನು ಸರ್ಕಾರ ಪಡೆಯುವ ಬದಲು ಶ್ರೀಮಂತ ವರ್ಗಕ್ಕೆ ಸಾಮಾಜಿಕ ಕಾರ್ಯಗಳ ಜವಾಬ್ದಾರಿಯನ್ನು ನೀಡಬಹುದು. ಉದಾಹರಣೆಗೆ, ಮಹಿಳಾ ಸಬಲೀಕರಣ, ಗ್ರಾಮೀಣ ಪ್ರದೇಶಗಳಲ್ಲಿ ಮೌಲ್ಯವರ್ಧಿತ ಶಿಕ್ಷಣ, ಆರ್ಥಿಕ ಸಬಲೀಕರಣ, ಬಡತನ ನಿರ್ಮೂಲನೆ, ಆರೋಗ್ಯ ಉದ್ಯೋಗ ಮತ್ತು ಉದ್ಯಮಶೀಲತೆ ಉತ್ಪಾದನೆ, ಪ್ರಾಥಮಿಕ ಆರೋಗ್ಯ ಉನ್ನತೀಕರಣ ಹೀಗೆ ಮುಂತಾದ ಕ್ಷೇತ್ರದಲ್ಲಿ ವ್ಯಹಿಸಲು ಸ್ವಾಯತ್ತ ಸಂಸ್ಥೆಗಳನ್ನು ನಿರ್ಮಾಣ ಮಾಡಬಹುದು.